Wednesday 15 November 2017

UC ಬ್ರೌಸರ್ ಬಳಕೆ ತಕ್ಷಣವೇ ನಿಲ್ಲಿಸಿ: ಪ್ಲೇ ಸ್ಟೋರಿನಿಂದ ಗೂಗಲ್ ಈ ಆಪ್‌ ತೆಗೆದು ಹಾಕಿದ್ದು ಆತಂಕಕ್ಕೆ ಕಾರಣವಾಗಿದೆ..

ಇದೇ ಕೆಲವು ದಿನಗಳ ಹಿಂದೆ ಗೂಗಲ್ ಪ್ಲೇ ಸ್ಟೋರಿನಲ್ಲಿ 500 ಮಿಲಿಯನ್ ಡೌನ್‌ಲೋಡ್ ಕಂಡಿದ್ದ ಬ್ರೌಸರ್ ಅನ್ನು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪ್ಲೇ ಸ್ಟೋರಿನಿಂದ ತೆಗೆದು ಹಾಕಲಾಗಿದೆ. ಇದಕ್ಕೆ ಯಾವ ಕಾರಣ ಎಂದು UC ಬ್ರೌಸರ್ ಕಡೆಯಿಂದ ಮಾಹಿತಿ ದೊರೆತಿಲ್ಲ ಆದರೆ ಮೂಲಗಳ ಪ್ರಕಾರ ಬಂದಿರುವ ಮಾಹಿತಿಯೂ ಆತಂಕಕ್ಕೆ ಕಾರಣವಾಗಿದೆ.
UC ಬ್ರೌಸರ್ ಮೂಲತಃ ಚೀನಾದ್ದಾಗಿದ್ದು, ಅಲಿಬಾಬಾ ಕಂಪನಿಯೂ UC ಬ್ರೌಸರ್ ಹುಟ್ಟು ಹಾಕಿದೆ ಎನ್ನಲಾಗಿದ್ದು, UC ಬ್ರೌಸರ್ ತನ್ನ ಬಳಕೆದಾದರ ಅತೀ ಅಮೂಲ್ಯವಾದ ಡೇಟಾಗಳನ್ನು ಚೀನಾದಲ್ಲಿರುವ ಸರ್ವರ್‌ಗೆ ಸಾಗಿಸುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಗೂಗಲ್ ಸೆಕ್ಯೂರಿಟಿ ಮುಂದಿಟ್ಟು, ಈ ಆಪ್ ಅನ್ನು ಪ್ಲೇ ಸ್ಟೋರಿನಿಂದ ಕಿತ್ತು ಹಾಕಿದೆ ಎನ್ನಲಾಗಿದೆ.

ಕೂಡಲೇ ಆನ್‌ಇನ್‌ಸ್ಟಾಲ್ ಮಾಡಿ:
ಈಗಾಗಲೇ UC ಬ್ರೌಸರ್ ಹೆಚ್ಚು ಖ್ಯಾತಿಯನ್ನು ಬಳಕೆ ಮಾಡಿಕೊಂಡಿದ್ದು, ಈ ಆಪ್‌ ಬಳಕೆ ಮಾಡಿಕೊಂಡು ನೀವು ಬ್ರೌಸ್ ಮಾಡಿದ ಪ್ರತಿ ಯೊಂದು ವಿಷಯವೂ ಆಪ್‌ನಲ್ಲಿ ದಾಖಲಾಗಲಿದ್ದು, ಅಲ್ಲಿಂದ ಚೀನಾದಲ್ಲಿರುವ ಸರ್ವರ್‌ಗೆ ಸಾಗಾಟವಾಗಲಿದೆ ಎನ್ನಲಾಗಿದೆ. ಇದರಿಂದ ಹೆಚ್ಚಿನ ಅಪಾಯ.
ನಿಮ್ಮ ಮಾಹಿತಿ ಲೀಕ್:
ನಿಮ್ಮ ಬ್ಯಾಂಕ್ ವ್ಯವಹಾರ ಸೇರಿದಂತೆ ವೈಯಕ್ತಿತ ಮಾಹಿತಿಯನ್ನು UC ಬ್ರೌಸರ್ ಲೀಕ್ ಮಾಡಲಿದೆ ಎನ್ನಲಾಗಿದ್ದು, ಚೀನಾ ಇದರ ಲಾಭ ಪಡೆಯುತ್ತಿದೆ ಎನ್ನಲಾಗಿದೆ.
ಈ ಹಿಂದೆಯೂ ವರದಿಯಾಗಿತ್ತು:
ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಯೊಂದು ಬಳಕೆದಾರರ ಮಾಹಿತಿಯನ್ನು ತನ್ನ ದೇಶಕ್ಕೆ ವರ್ಗಹಿಸುತ್ತಿದೆ ಎನ್ನುವುದು ತಿಳಿದು ಬಂದಿತ್ತು, ಇದಾದ ನಂತರದಲ್ಲಿ ಅಮೆಜಾನ್ ಆ ಸ್ಮಾರ್ಟ್‌ಫೋನ್ ಮಾರಾಟವನ್ನು ನಿರ್ಭಂದಿಸಿತ್ತು.
ಚೀನಾ ವಸ್ತು ಬಳಕೆಯಲ್ಲಿ ಎಚ್ಚರ:
ಡಿಜಿಟಲ್ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ನಮ್ಮ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ತೀರಾ ಅಗತ್ಯ. ಇಲ್ಲವಾದರೆ ಸಮಸ್ಯೆಯನ್ನು ಎದುರಿಸಬೇಕಾಗುವುದು ಅನಿವಾರ್ಯವಾಗಲಿದೆ. ಇದಕ್ಕಾಗಿಯೇ ಚೀನಾ ವಸ್ತುಗಳನ್ನು ಬಳಸುವ ಸಂದರ್ಭದಲ್ಲಿ ಎಚ್ಚರ ವಹಿಸುವುದು ಅಗತ್ಯ, ಅವಶ್ಯಕ.

No comments:

Post a Comment